airport ನಿಂದ ಇಳಿದ ತಕ್ಷಣ ಹೊರಗಡೆ ಬಂದಾಗ ಎಲ್ಲಿಗೆ ಹೋಗಬೇಕು, ಹೇಗೆ ಟಿಕೆಟ್ ತೊಗೋಬೇಕು, ಅನ್ನೋದರ ಬಗ್ಗೆ ಎಲ್ಲಾ ಗೊತ್ತಿದ್ರು... ಮನಸಿನಲ್ಲಿ ಏನೋ ತಳಮಳ.
ಅಲ್ಲಿಯ ಸುಸಜ್ಜಿತ ಟಿಕೆಟ್ ಕೌಂಟರ್ ನೋಡಿದ್ರೆ .. ಇದೇನು ಬಸ್ ಟಿಕೆಟ್ ಕೌಂಟರ್ ಅಥವಾ ಬೇರೆ ಯಾವುದೋ ಕೌಂಟರ್ ಅನಿಸಿತ್ತು. ಅದ್ರು ಹೋಗಿ ಕೇಳಿದ ಮೇಲೆ ಗೊತ್ತಾಯಿತು ಅದು ಟಿಕೆಟ್ ಕೌಂಟರ್ ಅಂತ.
---- ಗೆ ಒಂದು ಟಿಕೆಟ್ ಕೊಡಿ ಅಂತ ಕೇಳಿದೆ. ಅದಕ್ಕೆ ಅವರು ಕರೆಕ್ಟ್ ಅಡ್ರೆಸ್ ಬಗ್ಗೆ ಕೇಳಿದ್ರು.. ನನ್ನ ಹತ್ರ ಇದ್ದ ಅಡ್ರೆಸ್ ತೋರಿಸಿದ ಮೇಲೆ ಆ ಮಹಾತಾಯಿ ಟಿಕೆಟ್ ತಗೆದು ಕೊಟ್ಲು. ಅವಳಿಗೆ ಇಂಗ್ಲಿಷ್ ಬರೋಲ್ಲಾ .. ನಂಗೆ ಕೋರಿಯನ್ language ಬರೋಲ್ಲ ..
ಹಾಗೂ ಹೀಗೂ ಟಿಕೆಟ್ ಮೇಲೆ ಬರೆದಿರೋದನ್ನ understand ಮಾಡ್ಕೊಂಡು ಬಸ್ ಹತ್ತಿದೆ. ಬಸ್ ಒಳಗಡೆ ಇರೋ facility ನೋಡಿ ಆಶ್ಚರ್ಯ ಅಯಿತು. ಏನಪ್ಪಾ ಇದೆಲ್ಲ ಇರುತ್ತ್ತ ಬಸ್ ನಲ್ಲಿ ಅಂತ ಅನಿಸಿತ್ತು.. ನಾನು ನಮ್ಮೂರ ಬಸ್ಸನಲ್ಲಿ ಏನೇನು ಇರಬೇಕು ಅಂತ ಅನಕೊಂಡಿದ್ನೋ ಅದಕ್ಕಿಂತ ಹೆಚ್ಚಾಗೇ ಇತ್ತು.
ಬಸ್ಸನಲ್ಲಿ ಪ್ರತಿ ಆಸನಕ್ಕೆ seat belt, ಜೊತೆಗೆ ಕುಡಿಯಲಿಕ್ಕೆ ನೀರು, ಕಾಫಿ , ಟೀ ವ್ಯವಸ್ಥೆ , ದೊಡ್ಡದಾದ TV ಅದರಲ್ಲಿ advertisement ಜೊತೆಗೆ ಬಸ್ ಸ್ಟಾಪ್ ಬಗ್ಗೆ ಮಾಹಿತಿ, ಇಂಟರ್ನೆಟ್ (Wi-Fi), ಟಿಕೆಟ್ ವೆಂಡಿಂಗ್ ಮಷೀನ್, ಕ್ಯಾಮೆರಾ , ಮೈಕ್ & ಸೌಂಡ್ ಸಿಸ್ಟಮ್, ಏರ್ ಕಂಡಿಷನ್, ಬ್ಲಾಕ್ ಬಾಕ್ಸ್(ಏರೋ ಪ್ಲೇನ್ ನಲ್ಲಿ ಇರೋದು) , ಎಲ್ಲಕಿಂತಲೂ ಇಷ್ಟಾ ಆಗಿದ್ದು ಯಾವುದೇ ಬಸ್ಸನಲ್ಲಿ ಕಂಡಕ್ಟರ್ ಇರದಿರೋದು :)
ಮತ್ತೆ ಟಿಕೆಟ್ ಹ್ಯಾಗೆ ಕೊಡ್ತಾರೆ ಅಂತೀರಾ ?? ಅದಕ್ಕೂ ಒಂದು ಚೆನ್ನಾಗಿರೋ ವ್ಯವಸ್ಥೆ ಇದೆ. ಹಳೇ ಪದ್ಧತಿ ಥರಾ ದುಡ್ಡು ಕೊಟ್ಟರೆ ಸಾಕು, ಇನ್ನೊಂದು T-money ಕಾರ್ಡ್ ಉಪಯೋಗಿಸ್ತಾರೆ ಅದನ್ನ ಬಳಸಿದರೆ ಸ್ವಲ್ಪ ಕಡಿಮೆ ದುಡ್ಡು ಪ್ರಯಾಣಕ್ಕೆ !! ಇಲ್ಲಾ ಅಂದ್ರೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬಹುದು, ಬಸ್ ಹತ್ತೋವಾಗ ಒಂದು ಸಾರ್ತಿ ಕಾರ್ಡ್ ಬಳಸಿ. ನಂತರ ಬಸ್ಸ ಇಳಿಬೇಕಾದ್ರೆ ಒಂದು ಸಾರ್ತಿ ಕಾರ್ಡ್ ಬಳಸಿದರೆ ಮಷೀನ್ ಪ್ರಯಾಣಕ್ಕೆ ಎಷ್ಟು ದುಡ್ಡು ಅಂತ ಡಿಸೈಡ್ ಮಾಡಿ ಅಷ್ಟು ದುಡ್ಡು ಕಾರ್ಡ್ ನಿಂದ ಕಟ್ ಅಗುತ್ತೆ.
ಕಂಡಕ್ಟರ್ ಜೊತೆಗೆ ಜಗಳ ಇಲ್ಲಾ. ಚಿಲ್ಲರೇ ಇಸ್ಕೊಬೇಕು ಅನ್ನೋ ಥರಾ ಸಮಸ್ಯೆ ಇಲ್ಲಾ .
ಇಲ್ಲಿ ಜನರು ತುಂಬಾ ಪ್ರಾಮಾಣಿಕರು ಆದ್ರೂ ಅವರನ್ನ ಮತ್ತೆ ಡ್ರೈವರ್ ಅವರನ್ನ ನೋಡೋ ಹಾಗೆ ಒಂದು ಕ್ಯಾಮರಾ ಫಿಕ್ಸ್ ಮಾಡಿರ್ತಾರೆ, ಬಸ್ನಲ್ಲಿ ಏನೇನು ನಡೀತಾ ಇದೆಯಂತ ಒಂದು ರೂಮನಲ್ಲಿ ಕುತ್ಕೊಂಡು ನೋಡುವಷ್ಟು ವ್ಯವಸ್ಥೆ ಇದೆ. ಇದರಿಂದ ಎಲ್ಲಿಯೂ ಯಾರೂ ಮೋಸ ಹೋಗೋ ಚಾನ್ಸ್ ಇರೊಲ್ಲ.
!ಬಸ್ಸಿನ ಸಲುವಾಗೇ ಒಂದು ಬೇರೆ ಲೈನ್ ಇರುತ್ತೇ ರೋಡ್ ನಲ್ಲಿ .. ಅಲ್ಲಿ ಬೇರೆ ಗಾಡಿಗಳು ಬರೋದೇ ಇಲ್ಲಾ. ಬಂದ್ರೆ fine ಹಾಕ್ತಾರೆ! ಬಸ್ ಸ್ಟಾಂಡ್ನಲ್ಲಿ ಯಾವ ಬಸ ಯಾವಾಗ ಬರುತ್ತೆ , ಎಲ್ಲಿಂದ ಬರುತ್ತೇ, ಎಲ್ಲಿಗೆಹೋಗುತ್ತೆ ಅನ್ನೋದರ ಬಗ್ಗೆ ಪ್ರತಿ ನಿಮಿಷಕ್ಕೊಂದು ಸಾರ್ತಿ ಬಸ ಸ್ಟಾಂಡ್ನಲ್ಲಿ ಇರೋ TV ನಲ್ಲಿ ಇರುತ್ತೆ . ಬಸ ಹತ್ತುವಾಗ ಕೂಡಾ ಜನ ಲೈನ್ ನಲ್ಲಿ ನಿಂತುಕೊಂಡು ಬಸ್ ಹತ್ತುತ್ತಾರೆ, ನಮ್ಮ ಹಾಗೆ ಬಸ್ಸ ಒಳಗೆ ಕರ್ಚಿಫ್ ಹಾಕೋ ಪದ್ಧತಿ ಇಲ್ಲಾ..
ಹಾಗೆ ಎಲ್ಲಾ ಬಸ್ಸುಗಳು ಎಲ್ಲ ಕಡೆಗೆ ಹೋಗೋದಿಲ್ಲ. ಹತ್ತಿರ ಇರೋ ಸ್ಥಳಕ್ಕೆ ಹೋಗಲು Green ಬಸ್ಸು, ದೂರ ಇರೋ ಸ್ಥಳಕ್ಕೆ ಹೋಗಲು Blue ಬಸ್ಸು, ಬಹಳ ದೂರ ಇರೋ ಸ್ಥಳಕ್ಕೆ ಹೋಗಲು Red ಬಸ್ಸು ಉಪಯೋಗಿಸ್ತಾರೆ.. ಎಲ್ಲಾ ಬಸ್ಸುಗಳು ಸರಿಯಾದ ಟೈಮ್ ಗೆ ಬರ್ತಾವೆ.. ನಮ್ಮ ತರಹ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಅಲ್ಲ...
ಹಾಗೆ ಎಲ್ಲಾ ಬಸ್ಸುಗಳು ಎಲ್ಲ ಕಡೆಗೆ ಹೋಗೋದಿಲ್ಲ. ಹತ್ತಿರ ಇರೋ ಸ್ಥಳಕ್ಕೆ ಹೋಗಲು Green ಬಸ್ಸು, ದೂರ ಇರೋ ಸ್ಥಳಕ್ಕೆ ಹೋಗಲು Blue ಬಸ್ಸು, ಬಹಳ ದೂರ ಇರೋ ಸ್ಥಳಕ್ಕೆ ಹೋಗಲು Red ಬಸ್ಸು ಉಪಯೋಗಿಸ್ತಾರೆ.. ಎಲ್ಲಾ ಬಸ್ಸುಗಳು ಸರಿಯಾದ ಟೈಮ್ ಗೆ ಬರ್ತಾವೆ.. ನಮ್ಮ ತರಹ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಅಲ್ಲ...