ಮನದಾಳದ ಪಿಸುಮಾತಿನ ಪರಿಕಲ್ಪನೆಗೆ ಅಂತರ್ಜಾಲದ ರೂಪ ಕೊಡಲು ನನ್ನ ಮತ್ತು ನನ್ನಾಕೆಯ ಚಿಕ್ಕ ಮತ್ತು ಚೊಕ್ಕದಾದ ಬರಹದ ಗೊನೆಗಳು ಅಂದ ಹಾಗೆ ನಾನು ವಿನು ಮತ್ತೆ ನನ್ನಾಕೆ ಅನು.. ಇಬ್ರು ಜೊತೆಗೂಡಿ ಬರೆಯಬೇಕಾಗಿದೆ ಇನ್ನೂ!!!
Thursday, May 16, 2013
ವಧು ವರ ಪರೀಕ್ಷೆಗೆ ಮುನ್ನ
ವಯಸ್ಸಿಗೆ ಬಂದ ಹುಡುಗರಿಗೆ, ಮನೆಯಲ್ಲಿ ಮದುವೇ ಮಾಡ್ತಾರೆ ಅಂತ ಗೊತ್ತಾದ ಮೇಲೆ, ಒಂದು ರೀತಿಯ ಖುಷಿ, ಆತಂಕ, ದುಖ: ಇರುತ್ತೆ... ಯಾಕಂದ್ರೆ ಹುಡುಗರು ಮದುವೆಗಿಂತ ಮುಂಚೆ ತಮಗೆ ಮನಸ್ಸಿಗೆ ಬಂದದ್ದನು ಮಾಡ್ತಾ ಕಾಲ ಕಳಿತಾ ಇರ್ತಾರೆ. ಅದು ಏನು ಜವಾಬ್ದಾರಿ ಇಲ್ಲದೆ ಇದ್ರೆ ಪೋಲಿ ಹುಡುಗರ ಥರ ಟೈಮ್ ಪಾಸು ಮಾಡ್ತಾ, ಸಿಕ್ಕ ಸಿಕ್ಕ ಹುದುಗಿರ ಬಗ್ಗೆ ಕಾಮೆಂಟ್ ಹಾಕ್ತಾ ಇರ್ತಾರೆ. ಕೆಲಸ ಸೇರಿದ ಮೇಲಂತೂ... ಆಫೀಸಿನಲ್ಲಿ ಅವಳು ಹೊಸದಾಗಿ ಕೆಲಸಕ್ಕೆ ಸೇರಿದ್ದಾಳೆ, ಮತ್ತೆ ಅದರ ಜೊತೆಗೆ ಅವಳಿಗೆ ಬೇರೆ ನಿಕ್ಕ್ ನೇಮ್ ಕೊಡ್ತಾ, ಅವಳ ಬಗ್ಗೆ ಏನು ಗೊತ್ತಿಲ್ದೆ ಇದ್ರೂ ಕ್ಯಾಂಟೀನ್ನಲ್ಲಿ ಅವಳ ಬಗ್ಗೆ ಮಾತಾಡ್ತಾ ಕಾಲ ಕಳೆದು ಬಿಡ್ತಾರೆ.. ಅದೇ ಅವಳಾಗಿ ಬಂದು ಮಾತಾಡಿಸಿದರೆ ಮುಗಿತು, ಅದರ ಬಗ್ಗೆ ಉಪ್ಪು ಖಾರ ಸೇರಿಸಿ ಮಾತಾಡುತಾರೆ. ಇದನ್ನೆಲ್ಲಾ ಮಾಡುವ ಹುಡುಗರು ಮನೆಯಲ್ಲಿ ಹುಡುಗಿ ನೋಡಲಿಕ್ಕೆ ಶುರು ಮಾಡೋಣ ಅಂದ್ರೆ ಸಾಕು, ತಮ್ಮದೇ ಆದ ವರಸೆ ತಗಿತಾರೆ. ನಂಗೆ ಇನ್ನೂ ಟೈಮ್ ಬೇಕು. ಯಾತಕ್ಕೆ ಅಂತ ಹುಡುಗನಿಗೂ ಗೊತ್ತಿರೋಲ್ಲ. ಸುಮ್ಮನೆ ಮನೆಯವರ ಮುಂದೆ ದೊಡ್ದವನಗಲಿಕ್ಕೆ ಹೋಗ್ತಾನೆ!! ಆದ್ರೆ ಹಿರಿಯರಿಗೆ ಇಂತದ್ದನೆಲ್ಲಾ ನೋಡಿ ಅಭ್ಯಾಸ ಇರ್ರುತ್ತೆ.. .ಅದ್ರು ಇರಲಿ ಹುಡುಗ ಅಂತ ಟೈಮ್ ಕೊಡ್ತಾರೆ . ಹುಡುಗರು ನೋಡಿದ್ರೆ ಕೊಟ್ಟ ಟೈಮ್ ನಲ್ಲಿ ಸುಮ್ನೆ ಟೈಂಪಾಸ್ ಮಾಡ್ತಾರೆ ಹೊರತಾಗಿ ಏನೂ ಮಾಡೋದಿಲ್ಲ. ಕೊನೆಗೆ ಮನೆಯಲ್ಲಿ, ಇಷ್ಟು ದಿನಾ ಒಬ್ಬನೇ ಇದ್ದು ಮಜಾ ಮಾಡಿದ್ದು ಸಾಕು, ಒಂದು ಮದುವೇ ಮಾಡಿ ಬಿಡೋಣ ಇವನಿಗೆ. ಕೊಳ್ಳಿಗೆ ಒಂದು ಘಂಟೆ ಕಟ್ಟಿದ ಹಾಗೆ ಆಗಿ ಬಿಡುತ್ತೆ ಅಂತ ಯೋಚಿಸ್ತಾರೆ. ಆದ್ರೆ ಈಗಿನ ಹುಡುಗರು ಮತ್ತೆ ಹುದುಗಿರ ಡಿಮ್ಯಾಂಡ್ಸೆ ಬೇರೆ.. ಹುಡುಗನಿಗೆ ಹುಡುಗಿ ಸುಂದರವಾಗಿರಬೇಕು, ಕೆಲಸ ಮಾಡತಿರಬೇಕು, ನನ್ನನ್ನಾ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಬೇಕು, ಮನೆಯವರನ್ನ ಗೌರವದಿಂದ ಕಾಣಬೇಕು, ಮತ್ತು ಕೊನೆಯದಾಗಿ ಶ್ರೀಮಂತ ತಂದೆಯ ಒಂದೇ ಮಗಳು ಆಗಿರಬೇಕು ಅಂತೆಲ್ಲ ಯೋಚನೆ ಮಾಡ್ತಾ ಇರ್ತಾರೆ. ಒಂದಸಲ ಯೋಚನೆ ಮಾಡಿದಾಗ ಈ ರೀತಿ ಇರೋ ಹುಡುಗಿರನ್ನ ದುರ್ಬೀನ ಹಾಕಿ ಹುಡುಕಿದರೂ ಸಿಗೋಲ್ಲ. ಈ ರೀತಿ ಹುಡುಗಿ ಸಿಗೋದು ನೂರರಲ್ಲಿ ಒಂದು ಅಂತ ಗೊತ್ತಿದ್ರು ಅವರ ಮನೆಯಲ್ಲಿ ಹುಡುಗಿ ಹುಡುಕುವ ಮುಂದೆ ಇಷ್ಟು ಗುಣಗಳು ಇರಬೇಕು ಅಂತ ಕರಾರು ಹಾಕ್ತಾರೆ. ಹುಡುಗಿರಂತೂ .. ಬಿಟ್ಟುಬಿಡಿ.. ಹುಡುಗ ಇಂಜಿನಿಯರ್ ಆಗಿರಬೇಕು , ಸಾಫ್ಟ್ವೇರ್ ನಲ್ಲಿ ಕೆಲಸ ಮಾಡತಿರಬೇಕು ಸಾಫ್ಟ್ ಆಗಿ ಇರದಿದ್ದರೂ ನಡೆಯುತ್ತೆ!! ಸಂಬಳ ಏಳು ಅಂಕಿ ಮೇಲೆ ಇರಬೇಕು ಅಂತ ಯೋಚಿಸ್ತಾರೆ, ಜೊತೆಗೆ ಹುಡುಗ ನೋಡಲಿಕ್ಕೆ ಫಿಲಂ ಹೀರೋ ಥರ ಇರಬೇಕು ಅಂತ ಯೋಚಿಸ್ತಿರತಾರೆ, ಅದರ ಜೊತೆಗೆ ಒಂದು ಕಾರು, ಇರಲಿಕ್ಕೆ ಒಂದು ಮನೆ, ಇದ್ದರೆ ಅಷ್ಟೇ ಸಾಕು ಅಂತ ಮನೆಯವರಿಗೆ ತಮ್ಮ ಬೇಡಿಕೆ ಮುಂದೆ ಹಿರಿಯರ ತೋಡಿರುತ್ತಾರೆ.. ಆದ್ರೆ ನಮ್ಮ ಹಿರಿಯರು ಯೋಚನೆ ಮಾಡೋ ರೀತಿನೇ ಬೇರೆ ನೋಡಿ. ತಮಗೆ ಪರಿಚಯದರು ಇದ್ರೆ ಏನಾದ್ರು ಮಾಡಿ ಇಬ್ಬರನ್ನು ಘಂಟು ಹಾಕೋಣ ಅಂತ ಯೋಚಿಸ್ತಿರತಾರೆ. ಅದು ಬಿಡಿ.. ಇನ್ನೂ ಹುಡುಗ ಹುಡುಗಿ ಭೇಟಿ ಆಗದೇನೆ ಸಂಭಂದ ಬೆಳೆಸೋ ಮಟ್ಟಕ್ಕೆ ಬಂದು ಬಿಟ್ಟಿರುತಾರೆ. ಹುಡುಗ ಹುಡುಗಿ ಮಾತ್ರ ಹೆಸರಿಗೆ!!! ಆದ್ರು ಹುಡುಗ ಏನಾದ್ರು ತುಟಿ ಪಿಟಕ್ಕ ಅಂದ್ರೆ ಸಾಕು ಕೆಂಗಣ್ಣಿ ನಿಂದ ನೋಡುತಾರೆ. ಹುಡುಗ ಹುಡುಗಿನ ಬೇಡ ಅಂದ್ರೆ ಸಾಕು, ಆತ ಬದ್ದ ವೈರಿ ಆಗಿ ಬಿಡುತಾನೆ. ಹುಡುಗನಿಗೆ ಒಂದು ರೀತಿ ಮನಸ್ಸು ಪರಿವರ್ತನೆ ಮಾಡಲಿಕ್ಕೆ ನಿಂತಿರುತ್ತಾರೆ.
ಏನೇ ಕಾರಣ ಕೊಟ್ರು ಅವರ ಹತ್ರ ಅದಕ್ಕೆ ಉತ್ತರ ಸಿದ್ದವಾಗಿರುತ್ತೆ. ಹುಡುಗಿ ತೆಳ್ಳಗಿದ್ದಾಳೆ ಅಂದ್ರೆ ಮದುವೇ ಆದ ಮೇಲೆ ದಪ್ಪ ಆಗುತಾಳೆ ಬಿಡು ಅಂತಾರೆ, ಹುಡುಗಿ ದಪ್ಪಗಿದ್ದಾಳೆ ಅಂದ್ರೆ ಮದುವೇ ಆದ ಮೇಲೆ ನೀನು ದಪ್ಪ ಆಗಿತಿಯಾ, ಹುಡುಗಿ ಸುಂದರವಾಗಿಲ್ಲ ಅಂದ್ರೆ ಸಾಕು.. ನೀನೇನು ಫಿಲಂ ಹೀರೋ ಥರ ಇದ್ದೀಯ ನೋಡು, ನಿಂಗೆ ಇಷ್ಟು ಚೆನ್ನಾಗಿರೋ ಹುಡುಗಿ ಸಿಕ್ಕಿದ್ದೇ ಪುಣ್ಯ ಅಂತ ಹೇಳೇ ಬಾಯಿ ಮುಚ್ಚಿಸಿಬಿಡುತ್ತಾರೆ. ಅದು ಒಂದು ಪರಿ ಆದ್ರೆ ಇನ್ನೊಂದು ಪರಿ ಏನಂದ್ರೆ, ವರ ವಧು ಹುಡುಕಾಟ ಅಂತರ್ಜಾಲದ ಮೂಲಕ, ಹುಡುಗ ಹುಡುಗಿ ಇಬ್ಬರು ಭೇಟಿ ಆಗದೇನೆ ಒಬ್ಬರಿಗೊಬ್ಬರು ಪರಿಚಯ ಆಗಿ ಬಿಡುತಾರೆ. ಅಷ್ಟು ಆದ ಮೇಲೆ ಕೆಳತಿರಾ, ಚಾಟ್ , ಇ-ಮೇಲ್ , ಮೆಸೇಜ್ ಮಾಡೋದು, ಫೋನ್ ಮಾಡೋದು, ಕೊನೆಗೆ ಇಬ್ರು ಸೇರಿ ಕಾಫಿ ಡೇ ನಲ್ಲಿ ಕಾಫಿ ಕುಡಿದು, ಮುಂದಿನ ದಾರಿ ಬಗ್ಗೆ ಯೋಚನೆ ಮಾಡೋದು. ಇಬ್ಬರಿಗೋ ಒಪ್ಪಿಗೆ ಆದಮೇಲೆ ಇರೋದು ಸಮಸ್ಯೆ.. ಮೊದಲು ಮನೆಯಲ್ಲಿ ಹೇಳಬೇಕು, ಒಂದೇ ಜಾತಿ ಇದ್ರೆ ಚೆನ್ನ, ಇಲ್ಲಾಂದ್ರೆ ಮನೆಯವರನ್ನ ಒಪ್ಪಿಸೋಕೆ ಹರಸಾಹಸ ಮಾಡಬೇಕು. ಅದರ ಮೇಲೆ ಮಾನಸಿಕ ಒತ್ತಡ ಬೇರೆ. ಇನ್ನೊಂದು ಪರಿ ಏನಂದ್ರೆ.. ಈಗ ತಾನೆ ಮದುವೇ ಆದ ಜೋಡಿಗಳಿಗೆ ಮಾಡು ಆಗದಿರೋವರಿಗೆ ಮದುವೇ ಮಾಡಿಸೋ ಚಪಲ. ನಮ್ಮ ಸಂಪ್ರದಾಯದಲ್ಲಿ, ಹುಡುಗ ಹುಡುಗಿ ಒಪ್ಪಕೊಂದ್ರೆ ಮಾತ್ರ ಮದುವೇ ನಡೆಯುತ್ತೆ ಅನ್ನೋದಂತೂ ಸುಳ್ಳು. ಮದುವೆಗಿಂತ ಮುಂಚೆ ಹುಡುಗನ ಮನೆಯವರಿಗೆ ಮತ್ತೆ ಹುಡುಗಿಯ ಮನೆಯವರಿಗೆ ಪ್ರೀತಿ ಹುಟ್ಟಬೇಕು, ಅದು ಆದ ಮೇಲೆ ಇಬ್ಬರು ಒಪ್ಪಿಕೊಳ್ಳಬೇಕು, ಎಲ್ಲಾ ಆದ ಮೇಲೆ ಹುಡುಗ ಹುಡುಗಿ ಒಪ್ಪಿಕೊಂಡರೆ ಸಾಕು. ತುತ್ತೂರಿ ಬಾರಿಸಲಿಕ್ಕೆ ರೆಡಿ ಆಗಿ ಬಿಡುತಾರೆ.
ಒಂದಿಷ್ಟು ಪ್ರೀತಿ ಮಾತು ....
ಮೊನ್ನೆ ಮೊನ್ನೆ ಊರಿಗೆ ಹೋದಾಗ ನನ್ನ ಹಳೆಯ ಗೆಳೆಯ ರವಿ ಪೇಟೆಯಲ್ಲಿ ಸಿಕ್ಕ.
ಅವನನ್ನಾ ನೋಡಿದ ಕೂಡಲೇ ನನಗೆ ಗೊತ್ತ ಆಗಲೇ ಇಲ್ಲ .. ಕೈಯಾಗ್ ಒಂದೆರಡು ಬ್ಯಾಗು, ಜೋಲುಬಿದ್ದ ಮುಖ , ಅವನನ್ನಾ ನೋಡಿ ಅಯ್ಯೋ ! ಇದೇನಿದು ನಮ್ಮ ರವಿ ಹಂಗೆ ಕಾಣಿಸ್ತಾನೆ ಅಂತ ಯೋಚನೆ ಮಾಡೋದ್ರಲ್ಲೇ . ಆತ ಕೂಡ ನನ್ನ ನೋಡೇ ಬಿಟ್ಟ. ಆದರೂ ಆತ ನನ್ನಾ ಮಾತಾಡಿಸಲೋ ಬೇಡೋ ಅಂತ ಯೋಚನೆ ಮಾಡ್ತಾ ಇದ್ದ ಅಂತ ಅನಿಸಾಕತ್ತಿತ್ತು . ನಾನು ಬಿಡೆ ಬಿಟ್ಟು ಮಾತನಾಡಿಸೆ ಬಿಟ್ಟೆ.. ಹೆಂಗಿದಿಯಪ್ಪಾ? ಏನು ಬಹಳ ದೊಡ್ಡ ಮನಶ್ಯಾ ಆಗಿ ನೋಡಪ್ಪ, ಒಂದು ಫೋನ್ ಮಾಡೋದಿಲ್ಲ ? ಅಂತ ದಬಾಯಿಸಿದೆ. ಆತ ನನ್ನ ನೋಡಿ ಚೆನ್ನಾಗಿ ಅದೆನಿ ನೋಡ್ರಿ, ಗುಂಡು ಕಲ್ಲಿನ ಹಾಗೆ ಅಂತ ಚುಟುಕಾದ ಉತ್ತರ ಕೊಟ್ಟ . ನಂಗೆ ಅವನ ಕಡೆಯಿಂದ ಬಹುವಚನದಾಗ ಉತ್ತರ ಕೇಳಿದಾಗ ಆತ ನನ್ನ ಚುಚ್ಚಿ ಚುಚ್ಚಿ ಮಾಡತಿದಂಗ ಅನಿಸ್ತದೆ ಅಂತ ಹೇಳಲೇನೋ ಅನಿಸಿದ್ರು ಅವನ ಮುಖ ಮತ್ತೆ ಅವಸ್ತೆ ನೋಡಿ ಸುಮ್ಮಗಾಗಿ ಬಿಟ್ಟೆ .
ನಾನು ಅವನನ್ನು ಕೊನೆಗೆ ನೋಡಿದ್ದು ೧೦ ವರ್ಷದ ಹಿಂದೆ ಕಾಲೇಜ್ ನ ಕೊನೆ ವರ್ಷದ ಸಮಾರಂಭದಲ್ಲಿ.. ಆಗ ಅವನನ್ನ ನೋಡಬೇಕಿತ್ತು. ಎಷ್ಟು ಮಾತಾಡ್ತಾ ಇದ್ದ ಅಂದರೆ, ನಾವೇ ಸಾಕಾಗಿ ನಿನ್ನ ಮಾತನ್ನ ನಿಲ್ಲಿಸಪ್ಪ ಅಂತ ಬೇಡಿಕೊಂಡದ್ದು ಇದೆ. ನನ್ನ ಜೊತೆ ಅಂತು ಊರಾಗಿಂದ ಇದ್ದದ್ದು ಇರಲಾರದ್ದು ವಿಚಾರ ಹೇಳಿ ತೆಲೆ ತಿಂತಿದ್ದ. ನನ್ನ ಜೊತೆ ಎಲ್ಲಾ ವಿಷಯ ಹೇಳದೆ ಇದ್ರೆ ಅವನಿಗೆ ತಿಂದ ಊಟ ಕರಗ್ತಾ ಇರಲಿಲ್ಲೋ ಏನೋ ! ಯಾವಾಗಲು ನಮ್ಮ ನಡುವೆ ಏಕವಚನದಲ್ಲಿ ಸಂಭಾಷಣೆ ನಡೀತಾ ಇತ್ತು, ನಮ್ಮಿಬ್ಬರ ನಡುವೆ ಅಷ್ಟೊಂದು ಸಲುಗೆ ಇತ್ತು. ಎಲ್ಲಾದರು ಹೊರಗೆ ಹೋಗಬೇಕಂದ್ರೆ ಇಬ್ಬರು ಸೇರಿ ಹೋಗ್ತಾ ಇದ್ವಿ. ಊಟ, ಸಿನಿಮಾ ,ಹರಟೆ,ಹುಡುಗಿರನ್ನಾ ಕಾಡುದರಲ್ಲಿ ಕೂಡಾ ನಮ್ಮ ಇಬ್ಬರದು ಸಮ-ಪಾಲಿತ್ತು.
ಈಗ ಆತ ನೋಡಿದ್ರೆ ನನ್ನ ಬಹುವಚನದಲ್ಲಿ ಮಾತಾಡಿ ಪೇಚಾಟದಲ್ಲಿ ಸಿಕ್ಕಿಸಿಬಿಟ್ಟ, ಆದರೂ ನಾನೆ ಸ್ವಲ್ಪ ಸುಧಾರಿಸಿಕೊಂಡು ಅವನನ್ನಾ ಏಕವಚನದಲ್ಲೇ ಮಾತಾಡಿಸಲಿಕ್ಕೆ ಶುರು ಮಾಡಿದೆ. ಎಷ್ಟೋ ಮಕ್ಕಳು ? ಅಂತ ಕೇಳಿದೆ . ಆತ ಫಿಲ್ಮಿ ಡೈಲಾಗ್ ಹೇಳಿದಂಗ "ಆರತಿಗೊಬ್ಬಳು ಮತ್ತೆ ಕೀರ್ತಿಗೊಬ್ಬ" ಇದ್ದಾರೆ ನೋಡಪ್ಪ ಅಂದ. ನಂಗ ಆತ ಹೇಳಿದ ಮಾತಿನ ಧಾಟಿ ಕೇಳಿ ನಗೆ ಬಂತು, ಆದರೂ ಬಹಳ ದಿನ ಅದ ಮೇಲೆ ಸಿಕ್ಯಾನ ಅಂತ ಅವನನ್ನೇನು ಹಂಗಿಸಲಿಲ್ಲ. ಮತ್ತೆ ಮನೆಗೆ ಕರಿತಿಯೋ ಇಲ್ವೋ ಅಂತ ನಾನೆ ಮಾತಿಗೆ ಏಳದೆ. ಅದಕ್ಕ ಆತ ನನ್ನ ನೋಡಿ ನಡಿಲಾ ಹೋಗೋಣ ನಿಂಗು ನಿಮ್ಮ ಅತ್ತೆನ ಪರಿಚಯ ಮಾಡಿಸ್ತೆನಿ ಅಂದ (ಸ್ವಲ್ಪ ಬಿಗು ಮನಸಿನಿಂದ) . ಅದನ್ನ ನೋಡಿ ನಾನು ಹಂಗೆ ಕೇಳಿದ್ದೆ ಮಾರಾಯಾ ಅಂತೆ ಸ್ವಲ್ಪ ಸುಧಾರಿಸಿದೆ. ಅಥವಾ ಅವನಿಗೆ ನನ್ನ ಮೇಲೆ ಸಿಟ್ಟು ಇದೆ ಅಂತ ಗೊತ್ತು ಆಗಲೇ ಇಲ್ಲಾ . ನಾನು ಅದನ್ನ ಮರೆಯಿಸಬೇಕಂತ ಅಲ್ಲೇ ಇರೋ ಕಾಮತ್ ಹೋಟೆಲ್ಗೆ ಹೋಗಿ ಸ್ವಲ್ಪ ಚಾ ಕುಡಿಯೋನು ಬಾ ಅಂತ ಹೇಳಿಅವನನ್ನಾ ಕರೆದುಕೊಂಡು ಹೋದೆ. ಚಾ ಕುಡಿಯುವಾಗ ಕೂಡ ಇಬ್ಬರ ನಡುವೆ ಕಾಟಾಚಾರಕ್ಕೆ ಮಾತನಾಡಿದ ಹಾಗೆ ಮಾತಾಡಿ ನಾನು ನನ್ನ ದಾರಿಯಲ್ಲಿ ಹೊರಟೆ ಅವನಿಗೆ ಬೈ ಬೈ ಹೇಳಿ.
ದಾರಿಯಲ್ಲಿ ಒಬ್ಬನೇ ಬರಬೇಕಾದರೆ ನಂಗೆ ಅನಿಸ್ತಾ ಇತ್ತು . ಯಾಕೆ ಹೀಗಾಗುತ್ತೆ ? ಛೆ! ಅವನು ತುಂಬಾ ಬದಲಾಗಿ ಬಿಟ್ಟಿದ್ದಾನೆ. ಮೊದಲಿನ ಹಾಗಿಲ್ಲ. ಸರಿಯಾಗಿ ಕೂಡ ಮಾತಾಡ್ತಾ ಇಲ್ಲಾ ನನ್ನ ಜೊತೆ. ನಂಗೆ ಅವನ ಮೇಲೆ ಸಿಟ್ಟು ಬಂತು, ಆಮೇಲೆ ಸ್ವಲ್ಪ ಯೋಚನೆ ಮಾಡಿದೆ. ಅದರಲ್ಲಿ ಅವನದೇನು ತಪ್ಪಿದೆ ನಾನು ಕೂಡ ತಪ್ಪು ಮಾಡಿದ್ದೇನು ಅನಿಸ್ತಾ ಇತ್ತು . ಇವತ್ತು ಫೋನ್ ದರ ಇಷ್ಟು ಕಡಿಮೆ ಇದ್ದರು ಅವನಿಗೆ ಒಂದು ಸಲ ಕೂಡ ಕರೆ ಮಾಡಿರಲಿಲ್ಲ, ಕಳೆದ ೬ ವರ್ಷದಲ್ಲಿ ಒಂದು ಸಲ ಕೂಡ ಅವರ ಮನೆಗೆ ಹೋಗಿ ಬಂದಿರಲಿಲ್ಲ. ಆಗ ಅನಿಸ್ತಾ ಇತ್ತು ಜೀವನ ಎಷ್ಟು ವಿಚಿತ್ರ ಇದೆಯಲ್ಲ ಅಂತ. ಕಾಲೇಜ್ ಟೈಮ್ ನಲ್ಲಿ ಎಂದು ಕೂಡ ಬಿಟ್ತಿರದವರು ಈಗ ಮುಂದೆ ಬಂದಾಗ ಕೂಡ ಸರಿಯಾಗಿ ಮಾತಾಡಲಿಕ್ಕೆ ಆಗಲಿಲ್ಲ ಅಂತ ಅನಿಸಿ ದುಖ: ಆಯಿತು. ಕಾಲ ಎಲ್ಲದನ್ನು ಮರೆಸುತ್ತೆ ಅಂತ ಕೇಳಿದ್ದೆ ಆದರೆ ನಮ್ಮಲ್ಲಿರೋ ಭಾವನೆ ಮತ್ತೆ ನೆನಪು ಮರೆಯೋದು ಎಷ್ಟು ಕಷ್ಟ ಅಂತ ಭಾವನೆ ಬಂತು. ಮೊದಲನೇ ಸಾರಿ ನಾನು ಮಾಡಿದ ತಪ್ಪಿನ ಬಗ್ಗೆ ನನಗೆ ಕೆಟ್ಟು ಅನಿಸ್ತಾ ಇತ್ತು. ನನ್ನ ತಪ್ಪನ್ನ ಸ್ವಲ್ಪ ಮಟ್ಟಿಗೆ ಆದರೂ ಸುಧಾರಿಸಿಕೊಳ್ಳೋಣ ಅಂತ ನಿರ್ಧರಿಸಿ ರವಿಗೆ ಮನೆಗೆ ಬರ್ತೇನಿ ಅಂತಹೇಳಿ ಅಲ್ಲೇ ಇರೋ ಸ್ವೀಟ್ ಅಂಗಡಿಗೆ ಹೋಗಿ ೧/೨ ಕಿಲೋ ಸ್ವೀಟ್ ತಗೊಂಡು ಅವರ ಮನೆಯ ಕಡೆಗೆ ನಡೆದೆ.
Subscribe to:
Posts (Atom)