ಎಷ್ಟು ಬೇಗನೆ ಮುಗಿದು ಹೋಯಿತು ಈ ವರ್ಷ. ಯೋಚನೆ ಮಾಡೋದರೊಳಗೆನೆ ಒಂದು ವರ್ಷ ಕಳೆದು ಹೋಯಿತು. ಮೊನ್ನೆ ಮೊನ್ನೆನೆ ವರುಷ ಶುರುವಾಗಿದ ಹಾಗೆ ಭಾವನೆ, ಇಷ್ಟು ಬೇಗನೆ ಇನ್ನೊಂದು ವರ್ಷ ಕಳೆದು ಹೋಯಿತಲ್ಲ ಅಂತ ಅನಿಸ್ತಾ ಇತ್ತು..
ಆದರೂ ಏನೋ ಕಳೆದು ಹೋದ ಭಾವನೆ! ಕಳೆದು ಹೋದ ದಿನದಲ್ಲಿ ಏನು ಮಾಡಿಲ್ಲ ಅನ್ನೋ ದುಗುಡ ಒಂದೆಡೆ. ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತಾ ಆಗೋದೆಲ್ಲ ಒಳ್ಳೆಯದಕ್ಕೆ ಅನಿಸಿ ವರುಷದ ಕೊನೆ ದಿನ ಚೆನ್ನಾಗಿ ಆಚರಿಸೋಣ ಅಂತ ಯೋಚಿಸಿದರೆ ಹಾಳಾದ್ದು ಈ ಜಿಟಿ ಜಿಟಿ ಮಳೆ ಹೊಯ್ಯಲಿಕ್ಕೆ ಶುರು ಮಾಡಿತು. ಈಗ ಮಳೆ ನಿಲ್ಲುತ್ತೆ ಅಂತ ಯೋಚಿಸಿ ಕಚೇರಿ ಯಿಂದ ಹೊರಗೆ ಬಂದು ನೋಡಿದ್ರೆ ಮಳೆ ಜೋರಾಗೆ ಶುರು ಆಯಿತು. ಇರಲಿ ಬಿಡು ಮನೆಗೆ ಹೋಗದ್ರಲ್ಲಿ ಮಳೆ ನಿಲ್ಲುತ್ತಲ್ಲಾ ಅಂತಾ ಯೋಚಿಸಿ ಬಸ್ ಹತ್ತಿದರೆ ಮಳೆ ತುಂಬಾ ಜೋರಾಗಿ ಹೊಡಿಲಿಕ್ಕೆ ಶುರು ಮಾಡಿತು. ಮನೆಗೆ ಬಂದು ಪಾರ್ಟಿ ಮಾಡೋದಕ್ಕೆ ಹೋಗೋಣ ಅನಿಸ್ದ್ರು ಹಾಳಾದ್ದು ಮಳೆ ನಿಲ್ತಾನೆ ಇಲ್ಲ ಅನಕೋದ್ರಲ್ಲಿ ಕರೆಂಟ್ ಕೂಡ ಹೊರತು ಹೋಯಿತು. ಅಷ್ಟು ಹೊತ್ತಿಗೆ ನನ್ನ ಗೆಳೆಯನಿಗೆ ಕರೆ ಮಾಡಿದ್ರೆ ಅವರಲ್ಲೇ ಮಳೆಗೆ ಬೇಜಾರಾಗಿ ಹೋಗಿ ಹೊಸ ವರುಷದ ಆಚರಣೆಗೆ ಹೊರಗೆ ಹೋಗುವ ಯೋಚನೆ ಬಿಟ್ಟು ಹಾಕಿದ್ರು. ವರ್ಷದ ಕೊನೆಯ ದಿನ ಮನೆಯಲ್ಲೇ ಆಚರಿಸೋಣ ಅಂತಾ ಯೋಚನೆ ಬಂದ ಕೂಡಲೇ ಅಂಗಡಿಗೆ ಹೋಗಿ ಕ್ಯಾಂಡಲ್ ತಗೊಂಡು ಬಂದು
"ಕ್ಯಾಂಡಲ್ ಲೈಟ್ ಡಿನ್ನರ್"
ಶುರು ಮಾಡಿದೆ. ಊಟ ಮುಗಿದರು ಟೈಮ್ ಓಡ್ತಾನೆ ಇಲ್ಲ ಅನಿಸ್ತು. ಎಲ್ಲರಿಗೂ ಎಸ್ ಮ್ಮ್ ಎಸ್ ಕಳಿಸಿ ಕೂಡ ಆಯಿತು.
ಆಗ ಕಳೆದು ಹೋದ ವರ್ಷ ಹೊಸ ದಿನ ಏನೇನು ಸಂಕಲ್ಪ ತೊಟ್ಟಿದ್ದೆ ಅಂತಾ ಯೋಚಿಸೋಕೆ ಶುರು ಮಾಡಿದ್ರೆ, ಏನು ನೆನಪೇ ಬರ್ತಾನೆ ಇಲ್ವಲ್ಲ ಅನಿಸ್ತು, ಈ ಸಲ ಅದ್ರು ಎಲ್ಲಾದರು ಬರೆದು ಇಡೋಣ ಅನಿಸ್ತು. ಎಲ್ಲ ಪಟ್ಟಿ ಮಾಡಿ ಬರೆದು ಆಯಿತು.. ಅಷ್ಟರಲ್ಲೇ ಹೊಸ ವರ್ಷ ಬಂದೆಬಿಟ್ಟಿತ್ತು! ಇವತ್ತಿಗೆ ಇಷ್ಟು ಸಾಕು ಅಂತಾ ಯೋಚಿಸೋದ್ರಲ್ಲೇ ನಿದ್ರದೇವತೆಗೆ ಮೊರೆ ಹೋಗಿಬಿಟ್ತಿದ್ದೆ. ಬೆಳಿಗ್ಗೆ ಎದ್ದಾಗ ನನ್ನ ಮೊದಲನೇ ಸಂಕಲ್ಪವನ್ನ ಮುರಿದು ಬಿಟ್ಟಿದ್ದೆ.. ಆ ಸಂಕಲ್ಪಗಳ ಚಿಟಿ ನೋಡಿ ನಂಗೆ ಸ್ವಲ್ಪ್ ನಗು ಬಂತು . ಒಂದು ದಿನ ಕೂಡ ನಡೆದುಕೊಳಲಿಕ್ಕೆ ..
ಆಗಲಿಲ್ಲವಲ್ಲಾ ... ಅಂತಾ ಯೋಚಿಸಿ ಮರೆತು ಬಿಟ್ಟೆ. ಕೊನೆಗೆ ದೇವರ ದರ್ಶನ ಆದರೂ ಮಾಡೋಣ ಅಂತಾ ಅನಿಸಿದ ಕೂಡಲೇ ಸ್ನಾನ ಮಾಡಿ, ದೇವರ ದರ್ಶನ ಮಾಡಿ ಎಲ್ಲವನ್ನು ದೇವರ ಮೇಲೆ ಹಾಕಿ ಬಂದುಬಿಟ್ಟೆ.
ಹೊಸ ವರ್ಷದ ಹೊಸ ದಿನ ಬಂತು ಏನಾದರೂ ಹೊಸದನ್ನ ಮಾಡಬೇಕು ಅನಕೋದ್ರಲ್ಲೇ ಇವತ್ತು ಹೇಗಿದ್ರು ರಜೆ ಅಲ್ವ ಮನಸು ಹೇಳ್ತಾ ಇತ್ತು.. ಅಷ್ಟರಲ್ಲೇ ದೇಹ ನಿದ್ದೆಗೆ ಜಾರಿಬಿಟ್ಟಿತು.
No comments:
Post a Comment