ನಮಗಂತೂ ೪-ವರ್ಷ ಕ್ಯಾಂಟೀನಲ್ಲಿ ಕಳೆದ ಘಟನೆಗಳನ್ನು ಮೆಲಕು ಹಾಕ್ತಾ ಹೋದರೆ ಸಾಕು. ನೆನಪಿನ ಸುರಳಿಯ ಬುತ್ತಿ ಹಾಗೆ ಬಿಚ್ಚುತ್ತಾ ಹೋಗುತ್ತೆ... ಅದರಲ್ಲೂ ಚುಮು ಚುಮು ಚಳಿಗಾಲದಲ್ಲಿ ಸಿಗುತ್ತಿದ್ದ ಆ ಟೀ, ಆಲೂ ಬೋಂಡ, ಉಪ್ಪಿಟ್ಟು, ಕೇಸರಿ ಬಾತ್, ಪಲಾವ್, ಮತ್ತಿನ್ನೇನೇನೋ.. ಬೆಳಿಗ್ಗೆ ಬೇಗ ಬೇಗ ಎದ್ದು ಕ್ಲಾಸ್ ಗೆ ಹೋಗದೆ ಇದ್ದರು ಪರವಾಗಿಲ್ಲ ಕ್ಯಾಂಟೀನ್ ಹಾಜರಿ ಮಾತ್ರ ಕಾಯಂ ಆಗಿರ್ತಿತ್ತು.. ಒಂದೊಂದಸಲ ಸರ್ ಗಳು ಕೂಡ ಕೇಳಿದ್ದುಂಟು ನೀವು ಕ್ಲಾಸ್ ಗೆ ಬರ್ತಿರೋ ಅಥವಾ ಕ್ಯಾಂಟೀನ್ ಗೆ ಬರ್ತಿರೋ ಅಂತ ?? ಅಷ್ಟರ ಮಟ್ಟಿಗೆ ನಮ್ಮ ನಂಟು ಇತ್ತು. ಅಲ್ಲಿ ಗೆಳೆಯರು ಒಂದೇ ಪ್ಲೇಟನಲ್ಲಿ ತಿಂದ ಮೈಸೂರ್ ಬಜ್ಜಿ, ಪಲವ, ಇಡ್ಲಿ ವಡ, ... ನೆನಪುಗಳು ಇನ್ನು ಹಸಿ ಹಸಿಯಾಗೆ ಮನದಲ್ಲಿ ಉಳಿದಿವೆ.. ಯಾಕಂದ್ರೆ ಕ್ಯಾಂಟೀನ್ ನಲ್ಲಿ ನಾನು ಯಾವತ್ತು ಒಬ್ಬನೇ ಕುಳಿತುಕೊಂಡು ತಿಂಡಿ ತಿಂದ ನೆನಪೇ ಇಲ್ಲ.. ಯಾವಾಗಿದ್ರು ಗೆಳೆಯರ ಜೊತೆಗೆ, ಅದರಲ್ಲೂ ಎಲ್ಲರೂ ಕೈಯಲ್ಲಿ ಒಂದೊಂದು ಚಮಚೆ, ಟೇಬಲ್ ನಲ್ಲಿ ಟಿಫನ್ ಇಲ್ದೆ ಇದ್ರೂ ಪರವಾಗಿಲ್ಲ ಆದ್ರೆ ಕೈನಲ್ಲಿ ಒಂದು ಚಮಚೆ ಮಾತ್ರಾ ಇದ್ದೆ ಇರ್ತಿತ್ತು.. ನಮ್ಮ ಗೆಳೆಯರ ಗ್ಯಾಂಗ್ ನಲ್ಲಿ ಯಾರು ಟಿಫಿನ್ ತುಗೊಳ್ತಾ ಇದ್ದಾರೆ ಅಂತ ಹದ್ದಿನ ಕಣ್ಣಿನಿಂದ ನೋಡ್ತಾ ಇರತಿದ್ವಿ. ಒಂದು ಸಲ ಟಿಫಿನ್ ಕೈಯಲ್ಲಿ ಬಂದ್ರೆ ಸಾಕು, ಎಲ್ಲರೂ ಸೇರಿ ಮುಗಿಬಿದ್ದು ಒಂದೇ ನಿಮಿಷದಲ್ಲಿ ಟಿಫನ್ ಖಾಲಿ ಮಾಡ್ತಾ ಇದ್ದ ಸಮಯ ಅದು.. ಇದು ನಾನು ಟಿಫನ್ ತುಗೊಂಡಾಗ ಕೂಡ ಅನ್ವಯ ಆಗ್ತಿತ್ತು. ಆಗ ಎಲ್ಲರೂ ಕಚ್ಚಾಡಿಕೊಂಡು ತಿನ್ನೋ ಸುಖ ಮತ್ತೆ ಮಜ ಈಗ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಿಂದಾಗ ಕೂಡ ಸಿಗ್ತಾ ಇಲ್ಲ!!!
ಒಂದೊಂದು ಸಾರ್ತಿ ಒಂದೇ ಕೂಪನ್ ಎರಡು ಸಲ ಉಪಯೋಗಿಸಿದ್ದು, ಟೆಲಿಫೋನ್ ಬೂತ್ ನಲ್ಲಿ ೧೦ಪೈಸೆ ನಾಣ್ಯ ಹಾಕಿ, ಬೇರೆಯವರಿಗೆ ತೊಂದರೆ ಕೊಟ್ಟಿದ್ದು, ನಾವು ಕ್ಯಾಂಟೀನ್ ಮುಂದುಗಡೆ ಕೂತಕೊಂಡಾಗ ಸಿಟ್ಟು ಬಂದ ಶೆಟ್ಟರು ಸ್ಟೆಪ್ಸ್ ಮೇಲೆ ನೀರು ಹಾಕಿಸ್ತಿದ್ದ್ರು, ನಾವು ನಾಚಿಕೆ ಬಿಟ್ಟವರ ಹಾಗೆ ಮತ್ತೆ ಅದರ ಮೇಲೆ ಒಂದೆರಡು ಪೇಪರ್ ಹಾಕಿ ಕುತ್ಕೊತಾ ಇದ್ದ್ವಿ. ಬಾಗಿಲ ಹತ್ರ ಕೂತುಕೊಂಡು ಹೋಗೋ ಬರೋ ಹುಡುಗಿಯರಿಗೆ ಕಾಡಿದ್ದೇನು, ಒಂದೊಂದು ಸಾರ್ತಿ ಬೈಯಿಸಿ ಕೊಂಡು ಆಗಿತ್ತು ಅದರ ಸಲುವಾಗಿ.. ಆದ್ರೆ ಏನು ಮಾಡೋದು ನಾಯಿ ಬಾಲ ಡೊಂಕೆ ಅನ್ನುವ ಹಾಗೆ ಮತ್ತೆ ನಮ್ಮ ಚಾಳಿ ಬಿಡ್ತಾ ಇರಲಿಲ್ಲ.. ಆದ್ರೆ ಹುಡ್ಗಿರೋ ನಗೋ ಹಾಗೆ ಕಾಡಿಸ್ತಿದ್ವೆ ವಿನಃ ಬೇರೆ ರೀತಿಯಲ್ಲಿ ಅಲ್ಲ.. ಅದಕ್ಕೆ ಅನ್ಕೊತೆನಿ ಹುಡುಗಿರನ್ನ ಕಾಡಿಸಿದರೂ ಕೂಡ ಅವರು ನಾವು ಕೂತ್ಕೋ ಕಡೆಯಿಂದಾನೆ ಬಂದು ಹೋಗ್ತಾ ಇದ್ದರು. ಇಂಜಿನೀಯರಿಂಗ್ ಮಾಡುವಾಗ ಹುಡುಗರು ಅವರ ಅವರ ಡಿಪಾರ್ಟ್ಮೆಂಟ್ ಹುಡುಗರ ಜೊತೆಗೆ ಅಷ್ಟೇ ಇರ್ತಾರೆ ಅಂತ ಅನ್ನೋದನ್ನ ನಮ್ಮ ಬ್ಯಾಚ್ ನವರು ಸುಳ್ಳು ಮಾಡಿದ್ವಿ.. ಯಾಕಂದ್ರೆ ನಮ್ಮ ಈ ಗ್ರೂಪ್ ನಲ್ಲಿ ಎಲ್ಲ ಬ್ರಾಂಚ್ ಹುಡುಗರು ಅನ್ನೋನ್ಯವಾಗಿ ಇದ್ದ್ವಿ. ಹುಡುಗಿರನ್ನ ಚುಡಾಯಿಸೋ ಒಂದು ವಿಷ್ಯ ಬಿಟ್ಟು. ಅದರಲ್ಲೂ ಕೂಡ ಒಂದು ಒಪ್ಪಂದ ಇತ್ತು. ಅದು ಏನಂದ್ರೆ ಅವರವರ ಬ್ರಾಂಚ್ ನ ಹುಡುಗಿರೂ ಬಂದಾಗ ಅವರೇ ಸುಮ್ಮನೆ ಎದ್ದು ಹೋಗ್ತಾ ಇದ್ದರು :) ಒಂದೊಂದು ಸಾರ್ತಿ ನಂಗೆ ಗೊತ್ತಿರೋ ಹುಡುಗಿನ್ನ ಯಾಕೆ ಚುಡಾಯಿಸ್ತಿಯ ಅಂತ ಕೇಳಿದ್ರು.. ಅದನ್ನ ಅಲ್ಲಿಗೆ ಮುಗಿಸಿದ ಘಟನೆ ಕೂಡ ನಡೆದಿವೆ.
ಅಲ್ಲಿ ಕೂತುಕೊಂಡು ಬರೆದ ಅಸ್ಸೈನ್ಮೆಂಟ್ಗಳು, ಕಾಪಿ ಮಾಡಿದ ಹಿಂದನ ದಿನದ ಪ್ರಾಬ್ಲಮ್ ಗಳು, ಅಷ್ಟೇ ಯಾಕೆ, ಗ್ಲಾಸ್ಸ್ ಟ್ರೆಯ್ಸಿಂಗ್ ಏನು ಅಂತ ಗೊತ್ತಾಗಿದ್ದೆ ಅಲ್ಲಿ. ಪರೀಕ್ಷೆ ನಲ್ಲಿ ಚೆನ್ನಾಗಿ ಬರೆದು ಬಂದರೂ ಕೂಡ ಕ್ಯಾಂಟೀನ್ ನಲ್ಲಿ ಪಾರ್ಟಿ, ಬರದೆ ಇದ್ರೂ ಕೂಡ ಪಾರ್ಟಿ, ರಿಸಲ್ಟ್ ಬಂದ ದಿನ ಅಂತ್ರು ಪಾರ್ಟಿ ಮೇಲೆ ಪಾರ್ಟಿ.. ಒಂದೊಂದು ಸಲ ಎರಡು ಎರಡು ದಿನ ಪಾರ್ಟಿ ಮಾಡಿದ್ದುಂಟು, ನಮ್ಮ ಕಾಲೇಜ್ ಜೀವನದ ಎಲ್ಲ ಮಹತ್ವದ ನಿರ್ಧಾರಗಳಿಗೆ ಕಾಲೇಜ್ ಕ್ಯಾಂಟೀನ್ ಕೂಡ ಒಂದು ಸಾಕ್ಷಿ ಆಗಿ ಉಳಿದು ಬಿಟ್ಟಿದೆ.
ಕಾಲೇಜ್ ಮುಗಿದು 9-ವಸಂತಗಳೇ ಕಳೆದರು ಆ ನೆನಪುಗಳು ಇನ್ನು ಮಾಸದೆ ನಮ್ಮ ಮನಸಿನ್ನಲ್ಲಿ ಅಚ್ಚಳಿಯದ ಹಾಗೆ ಉಳಿದಿವೆ..
No comments:
Post a Comment