ನೀವು ಏನೇ ಹೇಳಿ ಮೇಸ್ಟ್ರೆ, ನಿಮ್ಮ ಮಗಳು ಅನು ಇಷ್ಟು ಬೇಗ ಸಾಯಬಾರದಗಿತ್ತು. ಈಗಿನ್ನೂ ಆಟದ ವಯಸ್ಸಿತ್ತು ನೋಡಿ, ದೈವದ ಆಟ ನೋಡ್ರಿ ಎಷ್ಟು ಬೇಗ ದೇವರು ತಮಗೆ ಬೇಕಾಗಿದ್ದವರನ್ನ ಕರಕೊಂಡುಬಿಟ್ಟ. ಅಂದಹಾಗೆ ಹೇಗಾಯಿತು ಅದೆಲ್ಲ ? ಪೇಚು ಮೋರೆ ಹಾಕಿಕೊಂಡು ಕೂತಿರುವ ಮೇಸ್ಟ್ರೆಗೆ ದುಖ: ಉಮ್ಮಳಿಸಿ ಬಂತು. ನಿರ್ವಿಕಾರವಾದ ಭಾವನೆಯಿಂದ ಮೇಸ್ಟ್ರು ಮಾತಾಡ್ತಾ , ಇಷ್ಟು ವರ್ಷ ಒಬ್ಬಳೇ ಮಗಳು ಅಂತಾ ತುಂಬಾ ಮುದ್ದಾಗಿ ಬೆಳೆಸಿಬಿಟ್ಟೆ,ಆಕೆ ಇಚ್ಚಾಗನುಗುನವಾಗಿ ಇಂಜಿನಿಯರಿಂಗ್ ಸೀಟ್ ಕೊಡಿಸಿ, ಆಕೆ ಕೇಳಿದ್ದನ್ನೆಲ್ಲ ಕೊಡಿಸಿದ್ದು ಆಯಿತು. ಆದರೆ ವಿಧಿ ಬರಹನೆ ಬೇರೆ ಇತ್ತು ಅಂತಾ ಕಾಣಿಸುತ್ತೆ.
ಮದುವೆ ಆಗಿ ಬರೋಬ್ಬರಿ ಎಂಟು ವರ್ಷಕ್ಕೆ ಹುಟ್ಟಿದ್ದು ನಮ್ಮ ಪ್ರೀತಿಯ ಮಗಳು ಅನು. ಒಬ್ಬಳೇ ಮಗಳು ಅಂತು ಎಲ್ಲರೂ ಪ್ರೀತಿಯಿಂದ ನೋಡಿದ್ದೇ ನೋಡಿದ್ದು. ಆಕೆ ಕೇಳಿದ್ದೆಲ್ಲ ತಥಾಸ್ತು ಅನ್ನುವ ಮನೆಯವರು.ಸ್ವಭಾವತಃ ತುಂಟಿಯಾದರು ಓದಿನಲ್ಲಿ ತುಂಬಾ ಮುಂದು. ನಮ್ಮನ ದಿನಾ ಗೋಳಿತ್ತಕೊಂಡರು ಅವಳ ಮೇಲೆ ನಮಗೆ ಸಿಟ್ಟು ಬಂದೆ ಇರಲಿಲ್ಲಾ. ಪಿ ಯು ಸಿ ನಲ್ಲಿ ರಾಜ್ಯಕ್ಕೆ ೫ನೆಯ ರಾಂಕ್ ಬಂದಾಗ ಆಕೆಗಿಂತ ನಾವೆಲ್ಲರೂ ಸಂತೋಷವಾಗಿದ್ದೆ ಹೆಚ್ಚು. ಎಷ್ಟು ಖುಷಿ ಪಟ್ಟು ತನಗೆ ಬೇಕಾದ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಇನ್ಫೋರ್ಮ್ಮೆಶನ್ ಸೈನ್ಸ್ ಗೆ ಸೀಟು ತಗೊಂಡಿದ್ದಳು.
ಕಾಲೇಜ್ ಗೆ ಬಸ್ಸಿನಲ್ಲೇ ಹೋಗು ಅಂದ್ರೆ ಕೇಳದೆ ನಮ್ಮೆಲ್ಲರ ಜೊತೆ ಹಠ ಮಾಡಿ, ಕಾಡಿ ಬೇಡಿ ಸ್ಕೂಟರ್ ತಗೊಂಡಿದ್ದಳು. ಅದೇ ಅವಳ ಬಾಳಿಗೆ ಮುಳ್ಳುಆಗುತ್ತೆ ಅಂತಾ ಗೊತ್ತಿದ್ರೆ ಅದನ್ನ ಕೊಡಿಸೋ ಯೋಚನೆ ಕೂಡ ಮಾಡ್ತಾ ಇರ್ಲಿಲ್ಲ. ಅವತ್ತು ಕಾಲೇಜ್ಗೆ ಹೋಗಬೇಕಾದ್ರೆ, ಎಲ್ಲರನ್ನು ಪ್ರೀತಿಯಂದ ಮಾತಾಡಿಸಿ ಹೋದಳು ಅಷ್ಟೇ. ಯಾರಿಗೋ ಆ ಜೀವ ಇನ್ನು ಮೇಲೆ ವಾಪಸ್ ಬರೋಲ್ಲ ಅಂತಾ ಗೊತ್ತ ಆಗಲೇ ಇಲ್ಲ . ವಿಧಿ ಬರಹ ಹೇಗಿದೆಯೋ ಹಾಗೆ ನಡಿಬೇಕು ಅನಿಸುತ್ತೆ. ಯಾರೋ ಮಾಡಿದ ತಪ್ಪಿಗೆ ಯಾರೋ ಬಲಿಪಶು ಆಗಬೇಕಾಯಿತು.
ಅವತ್ತು ಆಗಿದ್ದು ಇಷ್ಟೇ, ಬಿ ಬಿ ಮ್ ಪಿ ನವರು ಗುಂಡಿ ತೋಡಿ ಅದರ ಕಸವೆಲ್ಲ ರೋಡಿಗೆ ಹಾಕಿ, ಅದನ್ನ ತಗೆದು ಹಾಕೋದು ತಮ್ಮ ಕೆಲಸ ಅಲ್ಲ ಅಂತಾ ಬಿಟ್ಟು ಬಿಟ್ಟಿದ್ರು ನೋಡಿ. ಅದೇ ಕಸಕ್ಕೆ ಸಿಕ್ಕು ನನ್ನ ಮಗಳು ರೋಡಿನಲ್ಲಿ ಜಾರಿ ಬಸ್ ಗಾಲಿಗೆ ತುತ್ತಾದಳು. ಅಲ್ಲಿರೋರು ಆಸ್ಪತ್ರೆ ಗೆ ಸೇರಿಸಿದರು ಕೂಡ ನನ್ನ ಮುದ್ದು ಕಂದಮ್ಮ ಜೀವ ಮತ್ತೆ ಮರಣದ ಮಧ್ಯೆ ಹೋರಾಡುತ ಪ್ರಾಣಪಕ್ಷಿ ಬಿಟ್ಟಳು. ಈಗ ನಮ್ಮ ಹತ್ರ ಇರೋದು ಆಕೆಯ ನೆನಪಿನ ಸರಮಾಲೆ .
No comments:
Post a Comment