ವಯಸ್ಸಿಗೆ ಬಂದ ಹುಡುಗರಿಗೆ, ಮನೆಯಲ್ಲಿ ಮದುವೇ ಮಾಡ್ತಾರೆ ಅಂತ ಗೊತ್ತಾದ ಮೇಲೆ, ಒಂದು ರೀತಿಯ ಖುಷಿ, ಆತಂಕ, ದುಖ: ಇರುತ್ತೆ... ಯಾಕಂದ್ರೆ ಹುಡುಗರು ಮದುವೆಗಿಂತ ಮುಂಚೆ ತಮಗೆ ಮನಸ್ಸಿಗೆ ಬಂದದ್ದನು ಮಾಡ್ತಾ ಕಾಲ ಕಳಿತಾ ಇರ್ತಾರೆ. ಅದು ಏನು ಜವಾಬ್ದಾರಿ ಇಲ್ಲದೆ ಇದ್ರೆ ಪೋಲಿ ಹುಡುಗರ ಥರ ಟೈಮ್ ಪಾಸು ಮಾಡ್ತಾ, ಸಿಕ್ಕ ಸಿಕ್ಕ ಹುದುಗಿರ ಬಗ್ಗೆ ಕಾಮೆಂಟ್ ಹಾಕ್ತಾ ಇರ್ತಾರೆ. ಕೆಲಸ ಸೇರಿದ ಮೇಲಂತೂ... ಆಫೀಸಿನಲ್ಲಿ ಅವಳು ಹೊಸದಾಗಿ ಕೆಲಸಕ್ಕೆ ಸೇರಿದ್ದಾಳೆ, ಮತ್ತೆ ಅದರ ಜೊತೆಗೆ ಅವಳಿಗೆ ಬೇರೆ ನಿಕ್ಕ್ ನೇಮ್ ಕೊಡ್ತಾ, ಅವಳ ಬಗ್ಗೆ ಏನು ಗೊತ್ತಿಲ್ದೆ ಇದ್ರೂ ಕ್ಯಾಂಟೀನ್ನಲ್ಲಿ ಅವಳ ಬಗ್ಗೆ ಮಾತಾಡ್ತಾ ಕಾಲ ಕಳೆದು ಬಿಡ್ತಾರೆ.. ಅದೇ ಅವಳಾಗಿ ಬಂದು ಮಾತಾಡಿಸಿದರೆ ಮುಗಿತು, ಅದರ ಬಗ್ಗೆ ಉಪ್ಪು ಖಾರ ಸೇರಿಸಿ ಮಾತಾಡುತಾರೆ. ಇದನ್ನೆಲ್ಲಾ ಮಾಡುವ ಹುಡುಗರು ಮನೆಯಲ್ಲಿ ಹುಡುಗಿ ನೋಡಲಿಕ್ಕೆ ಶುರು ಮಾಡೋಣ ಅಂದ್ರೆ ಸಾಕು, ತಮ್ಮದೇ ಆದ ವರಸೆ ತಗಿತಾರೆ. ನಂಗೆ ಇನ್ನೂ ಟೈಮ್ ಬೇಕು. ಯಾತಕ್ಕೆ ಅಂತ ಹುಡುಗನಿಗೂ ಗೊತ್ತಿರೋಲ್ಲ. ಸುಮ್ಮನೆ ಮನೆಯವರ ಮುಂದೆ ದೊಡ್ದವನಗಲಿಕ್ಕೆ ಹೋಗ್ತಾನೆ!! ಆದ್ರೆ ಹಿರಿಯರಿಗೆ ಇಂತದ್ದನೆಲ್ಲಾ ನೋಡಿ ಅಭ್ಯಾಸ ಇರ್ರುತ್ತೆ.. .ಅದ್ರು ಇರಲಿ ಹುಡುಗ ಅಂತ ಟೈಮ್ ಕೊಡ್ತಾರೆ . ಹುಡುಗರು ನೋಡಿದ್ರೆ ಕೊಟ್ಟ ಟೈಮ್ ನಲ್ಲಿ ಸುಮ್ನೆ ಟೈಂಪಾಸ್ ಮಾಡ್ತಾರೆ ಹೊರತಾಗಿ ಏನೂ ಮಾಡೋದಿಲ್ಲ. ಕೊನೆಗೆ ಮನೆಯಲ್ಲಿ, ಇಷ್ಟು ದಿನಾ ಒಬ್ಬನೇ ಇದ್ದು ಮಜಾ ಮಾಡಿದ್ದು ಸಾಕು, ಒಂದು ಮದುವೇ ಮಾಡಿ ಬಿಡೋಣ ಇವನಿಗೆ. ಕೊಳ್ಳಿಗೆ ಒಂದು ಘಂಟೆ ಕಟ್ಟಿದ ಹಾಗೆ ಆಗಿ ಬಿಡುತ್ತೆ ಅಂತ ಯೋಚಿಸ್ತಾರೆ. ಆದ್ರೆ ಈಗಿನ ಹುಡುಗರು ಮತ್ತೆ ಹುದುಗಿರ ಡಿಮ್ಯಾಂಡ್ಸೆ ಬೇರೆ.. ಹುಡುಗನಿಗೆ ಹುಡುಗಿ ಸುಂದರವಾಗಿರಬೇಕು, ಕೆಲಸ ಮಾಡತಿರಬೇಕು, ನನ್ನನ್ನಾ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಬೇಕು, ಮನೆಯವರನ್ನ ಗೌರವದಿಂದ ಕಾಣಬೇಕು, ಮತ್ತು ಕೊನೆಯದಾಗಿ ಶ್ರೀಮಂತ ತಂದೆಯ ಒಂದೇ ಮಗಳು ಆಗಿರಬೇಕು ಅಂತೆಲ್ಲ ಯೋಚನೆ ಮಾಡ್ತಾ ಇರ್ತಾರೆ. ಒಂದಸಲ ಯೋಚನೆ ಮಾಡಿದಾಗ ಈ ರೀತಿ ಇರೋ ಹುಡುಗಿರನ್ನ ದುರ್ಬೀನ ಹಾಕಿ ಹುಡುಕಿದರೂ ಸಿಗೋಲ್ಲ. ಈ ರೀತಿ ಹುಡುಗಿ ಸಿಗೋದು ನೂರರಲ್ಲಿ ಒಂದು ಅಂತ ಗೊತ್ತಿದ್ರು ಅವರ ಮನೆಯಲ್ಲಿ ಹುಡುಗಿ ಹುಡುಕುವ ಮುಂದೆ ಇಷ್ಟು ಗುಣಗಳು ಇರಬೇಕು ಅಂತ ಕರಾರು ಹಾಕ್ತಾರೆ. ಹುಡುಗಿರಂತೂ .. ಬಿಟ್ಟುಬಿಡಿ.. ಹುಡುಗ ಇಂಜಿನಿಯರ್ ಆಗಿರಬೇಕು , ಸಾಫ್ಟ್ವೇರ್ ನಲ್ಲಿ ಕೆಲಸ ಮಾಡತಿರಬೇಕು ಸಾಫ್ಟ್ ಆಗಿ ಇರದಿದ್ದರೂ ನಡೆಯುತ್ತೆ!! ಸಂಬಳ ಏಳು ಅಂಕಿ ಮೇಲೆ ಇರಬೇಕು ಅಂತ ಯೋಚಿಸ್ತಾರೆ, ಜೊತೆಗೆ ಹುಡುಗ ನೋಡಲಿಕ್ಕೆ ಫಿಲಂ ಹೀರೋ ಥರ ಇರಬೇಕು ಅಂತ ಯೋಚಿಸ್ತಿರತಾರೆ, ಅದರ ಜೊತೆಗೆ ಒಂದು ಕಾರು, ಇರಲಿಕ್ಕೆ ಒಂದು ಮನೆ, ಇದ್ದರೆ ಅಷ್ಟೇ ಸಾಕು ಅಂತ ಮನೆಯವರಿಗೆ ತಮ್ಮ ಬೇಡಿಕೆ ಮುಂದೆ ಹಿರಿಯರ ತೋಡಿರುತ್ತಾರೆ.. ಆದ್ರೆ ನಮ್ಮ ಹಿರಿಯರು ಯೋಚನೆ ಮಾಡೋ ರೀತಿನೇ ಬೇರೆ ನೋಡಿ. ತಮಗೆ ಪರಿಚಯದರು ಇದ್ರೆ ಏನಾದ್ರು ಮಾಡಿ ಇಬ್ಬರನ್ನು ಘಂಟು ಹಾಕೋಣ ಅಂತ ಯೋಚಿಸ್ತಿರತಾರೆ. ಅದು ಬಿಡಿ.. ಇನ್ನೂ ಹುಡುಗ ಹುಡುಗಿ ಭೇಟಿ ಆಗದೇನೆ ಸಂಭಂದ ಬೆಳೆಸೋ ಮಟ್ಟಕ್ಕೆ ಬಂದು ಬಿಟ್ಟಿರುತಾರೆ. ಹುಡುಗ ಹುಡುಗಿ ಮಾತ್ರ ಹೆಸರಿಗೆ!!! ಆದ್ರು ಹುಡುಗ ಏನಾದ್ರು ತುಟಿ ಪಿಟಕ್ಕ ಅಂದ್ರೆ ಸಾಕು ಕೆಂಗಣ್ಣಿ ನಿಂದ ನೋಡುತಾರೆ. ಹುಡುಗ ಹುಡುಗಿನ ಬೇಡ ಅಂದ್ರೆ ಸಾಕು, ಆತ ಬದ್ದ ವೈರಿ ಆಗಿ ಬಿಡುತಾನೆ. ಹುಡುಗನಿಗೆ ಒಂದು ರೀತಿ ಮನಸ್ಸು ಪರಿವರ್ತನೆ ಮಾಡಲಿಕ್ಕೆ ನಿಂತಿರುತ್ತಾರೆ.
ಏನೇ ಕಾರಣ ಕೊಟ್ರು ಅವರ ಹತ್ರ ಅದಕ್ಕೆ ಉತ್ತರ ಸಿದ್ದವಾಗಿರುತ್ತೆ. ಹುಡುಗಿ ತೆಳ್ಳಗಿದ್ದಾಳೆ ಅಂದ್ರೆ ಮದುವೇ ಆದ ಮೇಲೆ ದಪ್ಪ ಆಗುತಾಳೆ ಬಿಡು ಅಂತಾರೆ, ಹುಡುಗಿ ದಪ್ಪಗಿದ್ದಾಳೆ ಅಂದ್ರೆ ಮದುವೇ ಆದ ಮೇಲೆ ನೀನು ದಪ್ಪ ಆಗಿತಿಯಾ, ಹುಡುಗಿ ಸುಂದರವಾಗಿಲ್ಲ ಅಂದ್ರೆ ಸಾಕು.. ನೀನೇನು ಫಿಲಂ ಹೀರೋ ಥರ ಇದ್ದೀಯ ನೋಡು, ನಿಂಗೆ ಇಷ್ಟು ಚೆನ್ನಾಗಿರೋ ಹುಡುಗಿ ಸಿಕ್ಕಿದ್ದೇ ಪುಣ್ಯ ಅಂತ ಹೇಳೇ ಬಾಯಿ ಮುಚ್ಚಿಸಿಬಿಡುತ್ತಾರೆ. ಅದು ಒಂದು ಪರಿ ಆದ್ರೆ ಇನ್ನೊಂದು ಪರಿ ಏನಂದ್ರೆ, ವರ ವಧು ಹುಡುಕಾಟ ಅಂತರ್ಜಾಲದ ಮೂಲಕ, ಹುಡುಗ ಹುಡುಗಿ ಇಬ್ಬರು ಭೇಟಿ ಆಗದೇನೆ ಒಬ್ಬರಿಗೊಬ್ಬರು ಪರಿಚಯ ಆಗಿ ಬಿಡುತಾರೆ. ಅಷ್ಟು ಆದ ಮೇಲೆ ಕೆಳತಿರಾ, ಚಾಟ್ , ಇ-ಮೇಲ್ , ಮೆಸೇಜ್ ಮಾಡೋದು, ಫೋನ್ ಮಾಡೋದು, ಕೊನೆಗೆ ಇಬ್ರು ಸೇರಿ ಕಾಫಿ ಡೇ ನಲ್ಲಿ ಕಾಫಿ ಕುಡಿದು, ಮುಂದಿನ ದಾರಿ ಬಗ್ಗೆ ಯೋಚನೆ ಮಾಡೋದು. ಇಬ್ಬರಿಗೋ ಒಪ್ಪಿಗೆ ಆದಮೇಲೆ ಇರೋದು ಸಮಸ್ಯೆ.. ಮೊದಲು ಮನೆಯಲ್ಲಿ ಹೇಳಬೇಕು, ಒಂದೇ ಜಾತಿ ಇದ್ರೆ ಚೆನ್ನ, ಇಲ್ಲಾಂದ್ರೆ ಮನೆಯವರನ್ನ ಒಪ್ಪಿಸೋಕೆ ಹರಸಾಹಸ ಮಾಡಬೇಕು. ಅದರ ಮೇಲೆ ಮಾನಸಿಕ ಒತ್ತಡ ಬೇರೆ. ಇನ್ನೊಂದು ಪರಿ ಏನಂದ್ರೆ.. ಈಗ ತಾನೆ ಮದುವೇ ಆದ ಜೋಡಿಗಳಿಗೆ ಮಾಡು ಆಗದಿರೋವರಿಗೆ ಮದುವೇ ಮಾಡಿಸೋ ಚಪಲ. ನಮ್ಮ ಸಂಪ್ರದಾಯದಲ್ಲಿ, ಹುಡುಗ ಹುಡುಗಿ ಒಪ್ಪಕೊಂದ್ರೆ ಮಾತ್ರ ಮದುವೇ ನಡೆಯುತ್ತೆ ಅನ್ನೋದಂತೂ ಸುಳ್ಳು. ಮದುವೆಗಿಂತ ಮುಂಚೆ ಹುಡುಗನ ಮನೆಯವರಿಗೆ ಮತ್ತೆ ಹುಡುಗಿಯ ಮನೆಯವರಿಗೆ ಪ್ರೀತಿ ಹುಟ್ಟಬೇಕು, ಅದು ಆದ ಮೇಲೆ ಇಬ್ಬರು ಒಪ್ಪಿಕೊಳ್ಳಬೇಕು, ಎಲ್ಲಾ ಆದ ಮೇಲೆ ಹುಡುಗ ಹುಡುಗಿ ಒಪ್ಪಿಕೊಂಡರೆ ಸಾಕು. ತುತ್ತೂರಿ ಬಾರಿಸಲಿಕ್ಕೆ ರೆಡಿ ಆಗಿ ಬಿಡುತಾರೆ.
No comments:
Post a Comment